SVADH – Current Affairs Genius

ಈ ಸ್ಪರ್ಧೆ ಕುರಿತು,

ಈ ಸ್ಪರ್ಧೆಯು ೨೦೧೮ ರ ಏಪ್ರಿಲ್ 15 ರಂದು ಪ್ರಾರಂಭವಾಗಲಿದ್ದು , ಪ್ರತಿ ತಿಂಗಳು 3ನೇ ಭಾನುವಾರದಂದು ಈ ಸ್ಪರ್ಧೆಯು ನಡೆಯುತ್ತದೆ. ಈ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ.

ಈ ಸ್ಪರ್ಧೆಯಲ್ಲಿ ನಿರ್ದಿಷ್ಟಪಡಿಸಿದ ಅಂಕಗಳಲ್ಲಿ ಮೊದಲ ಶ್ರೇಣಿಯಲ್ಲಿ ಅಂಕಗಳಿಸಿದವರಿಗೆ ರೂ.5000 (ಐದು ಸಾವಿರ) ನಗದು ಬಹುಮಾನವಾಗಿ ಪ್ರಶಸ್ತಿ ಪತ್ರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳೊಂದಿಗೆ ನೀಡಲಾಗುವುದು.

ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ರೂ. 100 ಪ್ರವೇಶದರ ನೀಡಬೇಕು.( ನೂರು ರೂಪಾಯಿ ಪ್ರವೇಶ ದರ ನೀಡಿದವರಿಗೆ ವೆಬ್‌ಸೈಟ್ (www.shreeyaaedu.in) ನಲ್ಲಿ ಅನೇಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು Online Test ನಲ್ಲಿ ಭಾಗವಹಿಸಲು 2 ತಿಂಗಳವರೆಗೆ ಉಚಿತ ಪ್ರವೇಶ ನೀಡಲಾಗುವುದು)

ಈ ಸ್ಪರ್ಧೆಯಲ್ಲಿ ಯಾರು ಬೇಕಾದರೂ, ಯಾವುದೇ ವಯಸ್ಸಿನವರು ಬೇಕಾದರೂ ಭಾಗವಹಿಸಬಹುದು.

ಈ ಸ್ಪರ್ಧೆಯ ಉದ್ದೇಶ

* ಮುಖ್ಯ ಉದ್ದೇಶ : ಕನ್ನಡ ಮಾಧ್ಯಮದ ಮತ್ತು ಕರ್ನಾಟಕದ ಗ್ರಾಮೀಣ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು.

* ಜ್ಞಾನಕ್ಕಿಂತಲೂ ಮಿಗಿಲಾದ ಶಕ್ತಿ ಮತ್ತೊಂದಿಲ್ಲ, ಜ್ಞಾನವೃದ್ಧಿ ಮೊತ್ತಮೊದಲ ಉದ್ದೇಶ.

* ಇಂದಿನ ಎಲ್ಲ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆ (Current events) ಗಳ ಮೇಲಿನ ಪ್ರಶ್ನೆಗಳು ಅನಿವಾರ್ಯವಾಗಿವೆ. ಹಾಗಾಗಿ, ಈ ಮೂಲಕ ನಮ್ಮ ವಿದ್ಯಾರ್ಥಿ-ಸ್ಪರ್ದಾರ್ಥಿಗಳನ್ನು ಸಿದ್ದಗೊಳಿಸುವುದು. ಪ್ರತಿಯೊಬ್ಬರನ್ನೂ (ರಾಜ್ಯದ, ದೇಶದ ಮತ್ತು ಅಂತರಾಷ್ಟ್ರೀಯ )ದೈನಂದಿನ ಆಗುಹೋಗುಗಳೆಡೆಗೆ, ದಿನ ಪತ್ರಿಕೆಗಳೆಡೆಗೆ ಆಸಕ್ತರಾಗುವಂತೆ ಪ್ರೇರೇಪಿಸುವುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿರಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡುವುದು.

* ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಓದಿನಲ್ಲಿ, ಜ್ಞಾನದಲ್ಲಿ ಹಾಗೂ ಸ್ಪರ್ಧೆಯಲ್ಲಿ ಆಸಕ್ತಿ ಉಂಟು ಮಾಡುವುದು.

* ನಗದು ಬಹುಮಾನದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವ ವಿದ್ಯಾರ್ಥಿಗಳಿಗೆ ಹಣದ ಸಹಾಯ ಒದಗಿಸುವುದು.

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿ ತಯಾರಿ ನಡೆಸಲು ಗುಣಮಟ್ಟದ ಸಂಪನ್ಮೂಲಗಳ ಕೊರತೆಯನ್ನು ಸರಿದೂಗಿಸುವುದು ನಮ್ಮ ಸಂಸ್ಥೆಯ ಮತ್ತು ಈ ಪ್ರಯತ್ನಗಳ ಪ್ರಾಥಮಿಕ ಉದ್ದೇಶವಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ...?

ಮೊದಲು ನಿಮ್ಮ ವಿವರಗಳೊಂದಿಗೆ www.shreeyaaedu.in ಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಿ, ನಂತರ ಒಂದು ದಿನ ಬಿಟ್ಟು ನೀವು ಲಾಗಿನ್ ಆಗಬಹುದು ಮತ್ತು ಇತರೆ ಉಚಿತ test ಗಳನ್ನು ಪ್ರಾಕ್ಟೀಸ್ ಮಾಡಬಹುದು.

ಪ್ರವೇಶ ದರ ನೀಡುವುದು ಹೇಗೆ...?

ರೂ. 100 , 9880742538 ಮೊಬೈಲ್ ನಂ. ಗೆ paytm ಮಾಡಬಹುದು ಅಥವಾ ಬ್ಯಾಂಕಿನ ಖಾತೆಗೆ deposit ಮಾಡಬಹುದು.